ಸೋಮವಾರ, ಮಾರ್ಚ್ 11, 2013

ಕರ್ನಾಟಕ ಜನಸಾಹಿತ್ಯ ಸಮಾವೇಶ  

ಪ್ರಿಯರೆ

ಇದು ಜನಸಾಮಾನ್ಯರ ಬಳಿಗೆ ಸಾಹಿತ್ಯವನ್ನು ಒಯ್ಯಬಹುದಾದ ಆಶಯದ ನೆಲೆಯಲ್ಲಿ ಹುಟ್ಟಿಕೊಂಡ ಒಂದು ಸಮಾನಾಸಕ್ತರ ಬಳಗದ ಆಲೋಚನ ಕ್ರಮ.  ಈ ಆಲೋಚನ ಕ್ರಮ ಇಂತದ್ದೇ ಎನ್ನುವ ಸಿದ್ದ ನಿರೂಪಣೆಗಳಿಲ್ಲ. ಈ ಬಳಗ ಯೋಜಿಸುವ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಇದು ಒಂದು ಸ್ವರೂಪವನ್ನು ಪಡೆಯುತ್ತಾ ಹೋಗುತ್ತದೆ. ಈ ಚಟುವಟಿಕೆಯ ಮೊದಲ ಹಂತದ ಕಾರ್ಯಕ್ರಮ ಇದೇ ಮಾರ್ಚ 23,24 ರಂದು ದಾರವಾಢದಲ್ಲಿ ನಡೆಯಲಿದೆ. ಇಲ್ಲಿ ಸಮಾನಾಸಕ್ತ ಗೆಳೆಯ ಗೆಳತಿಯರೆಲ್ಲಾ ಒಂದೆಡೆ ಸೇರುತ್ತಿದ್ದಾರೆ. ಈ ಕಾರ್ಯ ಕ್ರಮದ ಪಟ್ಟಿಯನ್ನು ಇದೇ ಬ್ಲಾಗ್ ನಲ್ಲಿ ಒಂದೆರಡು ದಿನಗಳಲ್ಲಿ ಪ್ರಕಟಿಸಲಾಗುವುದು. ಇಲ್ಲಿ ಕರ್ನಾಟಕ ಜನ ಸಾಹಿತ್ಯ ಸಮಾವೇಶ ಎಲ್ಲಾ ಚಟುವಟಿಕೆಗಳು ಪ್ರಕಟವಾಗುತ್ತಾ ಹೋಗುತ್ತ ವೆ. ದಯವಿಟ್ಟು ಗಮನಿಸಿ

-ಅರುಣ್ ಜೋಳದಕೂಡ್ಲಿಗಿ

ಜನತೆಯತ್ತ ಸಾಹಿತ್ಯ ಬಳಗದ ಪರವಾಗಿ.

.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ