ಶುಕ್ರವಾರ, ಮಾರ್ಚ್ 22, 2013

ಇಂದು ಜನಸಾಹಿತ್ಯ ಸಮಾವೇಶ

 
 
 
ಧಾರವಾಡ: ಇಂದು ಕರ್ನಾಟಕ ವಿದ್ಯಾವರ್ಧಕ ಸಂಘ, ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ಬಹು ನಿರೀಕ್ಷಿತ ಕರ್ನಾಟಕ ಜನಸಾಹಿತ್ಯ ಸಮಾವೇಶ ನಡೆಯಲಿದೆ. ಬೆಳಗ್ಗೆ ೧೦.೩೦ ಕ್ಕೆ ಆರಂಭವಾಗುವ ಈ ಸಮಾವೇಶದಲ್ಲಿ ಡಾ.ಎಂ.ಡಿ. ವಕ್ಕುಂದ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಲಿದ್ದಾರೆ. ಮರಾಠಿಯ ಪ್ರಸಿದ್ಧ ದಲಿತ ಲೇಖಕರಾದ ಲಕ್ಷಣ್ ಗಾಯಕವಾಡ ಅವರು ಆಶಯ ಭಾಷಣ ಮಾಡಲಿದ್ದಾರೆ. ಹಾಸನದ ಲೇಖಕಿ ಬಾನು ಮಷ್ತಾಕ್ ಮತ್ತು ಜಿ. ರಾಮಕೃಷ್ಣ ಅವರು ಆಶಯದ ಮಾತುಗಳನ್ನು ವಿಸ್ತರಿಸಲಿದ್ದಾರೆ. ಡಾ. ಸಂಜೀವ ಕುಲಕರ್ಣಿ ಅವರು ಈ ಗೋಷ್ಠಿಯನ್ನು ಸಂಯೋಜಿಸುತ್ತಾರೆ.

   ಮಧ್ಯಾನ ೧೨ ರಿಂದ ೨ ತನಕ ‘ವರ್ತಮಾನದ ಬಿಕ್ಕಟ್ಟು:ವಿವಿಧ ನೋಟಗಳು’ ಕುರಿತಂತೆ ದು.ಸರಸ್ವತಿ, ಡಾ.ನಾಗೇಶ್  ಹೆಗಡೆ, ಡಾ.ಬಂಜಗೆರೆ ಜಯಪ್ರಕಾಶ್, ಡಾ.ಎಸ್.ಬಿ.ಜೋಗೂರ ಅವರು ಬೇರೆ ಬೇರೆ ನೆಲೆಗಳಿಂದ ಮಾತನಾಡಲಿದ್ದಾರೆ. ಪ್ರಸಿದ್ಧ ರಾಜಕೀಯಾರ್ಥಿಕ ಚಿಂತಕರಾದ ಡಾ.ಮುಜಾಫರ್ ಅಸ್ಸಾದಿ ಅವರು ಸ್ಪಂದನದ ಮಾತುಗಳನ್ನು ಆಡಲಿದ್ದಾರೆ. ಈ ಗೋಷ್ಠಿಯನ್ನು ಡಾ.ಜಗದೀಶ್ ಕೊಪ್ಪ ಅವರು ಸಂಯೋಜನೆ ಮಾಡಲಿದ್ದಾರೆ.
 ಮಧ್ಯಾನ ೩ ರಿಂದ ೫.೨೦ ರ ತನಕ ‘ಸಮಾಜ ಮತ್ತು ನನ್ನ ಬರಹ’ ಎಂಬ ವಿಷಯವಾಗಿ ಕರ್ನಾಟಕದ ಬೇರೆ ಬೇರೆ ಪ್ರದೇಶದ ಯುವ ಬರಹಗಾರರಾದ ಸರ್ಜಾಶಂಕರ್ ಹರಳಿಮಠ, ಬಿ.ಪೀರ್‌ಬಾಷಾ, ವೀರಣ್ಣ ಮಡಿವಾಳರ, ಡಾ.ಅನಸೂಯ ಕಾಂಬಳೆ, ವಸಂತ ಬನ್ನಾಡಿ, ಡಾ.ಮಲ್ಲಿಕಾರ್ಜುನ ಮೇಟಿ, ಟಿ.ಕೆ.ದಯಾನಂದ, ಬಾಲ ಗುರುಮೂರ್ತಿ, ರಮೇಶ್ ಅರೋಲಿ ತಮ್ಮ ತಮ್ಮ ಬರಹದ ನೆಲೆಗಳಿಂದ ಮಾತನಾಡಲಿದ್ದಾರೆ. ಈ ಗೋಷ್ಠಿಯನ್ನು ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಅವರು ಸಂಯೋಜನೆ ಮಾಡಲಿದ್ದಾರೆ.
   ಸಂಜೆ ೫.೩೦ ರಿಂದ ೮ ರ ತನಕ ನಾಡಿನ ೩೮ ಯುವ ಕವಿ ಕವಯಿತ್ರಿಯರು ತಮ್ಮ ಕವನಗಳನ್ನು ವಾಚಿಸಲಿದ್ದಾರೆ. ಈ ಗೋಷ್ಠಿಯಲ್ಲಿ ಪ್ರಸಿದ್ಧ ಕವಿ ಡಾ.ಎಸ್.ಜಿ.ಸಿದ್ಧರಾಮಯ್ಯ ಅವರು ಸ್ಪಂದನೆ ನೀಡಲಿದ್ದಾರೆ. ಡಾ.ಅಶೋಕ ಶೆಟ್ಟರ್ ಅವರು ಈ ಗೋಷ್ಠಿಯ ಸಂಯೋಜನೆ ಮಾಡಲಿದ್ದಾರೆ.
ರಾತ್ರಿ ೮ ಕ್ಕೆ ಜನಾರ್ಧನ್ ಜನ್ನಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಚಾಲನೆ ನಡೆಯುತ್ತದೆ. ಕೇಸರಿ ಹರವೂ ನಿರ್ದೇಶನದ ‘ನಗರ ಮತ್ತು ನದೀ ಕಣಿವೆ’ ಸಾಕ್ಷ್ಯಚಿತ್ರ ಪ್ರದರ್ಶನವಿದೆ.
ನಂತರ ಸತೀಶ ಶಿವಪ್ಪನವರ ಹಾಗೂ ಸಂಗಡಿಗರ ತತ್ವಪದ, ಇಪ್ಟಾ, ಸಮುದಾಯ ಕಲಾವಿದರಿಂದ ಹಾಡುಗಾರಿಕೆ ಇದೆ.
 
ಈ ಸಮಾವೇಶಕ್ಕೆ ವಿಧ್ಯಾರ್ಥಿಗಳಿಗೆ, ಸಂಶೋಧಕರಿಗೆ, ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಆಸಕ್ತ ವಿದ್ವಾಂಸರು, ಸಾಹಿತಿಗಳು, ಹಿರಿಯರು ಈ ಕಾರ್ಯಕ್ರಮಕ್ಕೆ ಭಾಗವಹಿಸಬೇಕೆಂದು ಸಂಘಟಕರು ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ